Svoboda | Graniru | BBC Russia | Golosameriki | Facebook
ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಚಂದ್ರಮತಿ.

ನಾವನೂ ನಿಮಿಷಮಾತ್ರವಾದರೂ ಸೇರಲೊಲ್ಲನು. ಹೀಗಿರುವಾಗ ಸ್ತ್ರೀ ಯರಿಗೆ ವಿದ್ಯೆಯನ್ನು ಕಲಿಸದೆ, ಪಶುಗಳೊಡನೆ ಸಹವಾಸಮಾಡುವಂತೆ ತ್ರಿಕಾಲದಲ್ಲಿಯೂ ಅವಿದ್ಯಾವತಿಯರಾದ ಅಂಥವರೊಡನೆ ಸಹವಾಸಮಾಡ ಬೇಕೆಂದು ಉಪದೇಶಿಸುವವನು ಎಂತಹ ಬುದ್ದಿವಂತನೆನಿಸುವನೋ ಅದನ್ನು ನಾನು ತಿಳಿಸತಕ್ಕ ಅವಶ್ಯಕವಿಲ್ಲ. ನಿಷ್ಪಕ್ಷಪಾತವಾಗಿ ಆಲೋಚಿಸಿದರೆ, ವಿದ್ಯೆಯಿಲ್ಲದವರಿಗೂ ವಿದ್ಯೆಯನ್ನು ಕಲಿತವರಿಗೂ ಕತ್ತಲೆಗೂ ಬೆಳಕಿಗೂ ಇರುವಷ್ಟು ಭೇದವಿರುವುದು. ಐಕ್ಯಮತ್ಯದಿಂದ ಇಬ್ಬರಿಗೂ ಶುಭ ಉಂಟಾಗು ವಂತೆ ರಹಸ್ಯವಾಗಿ ಸಂಸಾರವನ್ನು ನಡೆಯಿಸಿಕೊಳ್ಳಬೇಕಾದವರಾದ ಭಾರ್ಯಾಭರ್ತರಲ್ಲಿ ವಿದ್ಯಾವ್ಯತ್ಯಾಸದಿಂದ ಒಬ್ಬರ ಮಾರ್ಗವು ಮತ್ತೊಬ್ಬರಿಗೆ ಸರಿಬೀಳದೆ ಒಬ್ಬರು ಊರಿಗೆಳೆದರೆ ಒಬ್ಬರು ನೀರಿಗೆಳೆಯುವಂತಹರಾದರೆ ಪ್ರಪಂಚದಲ್ಲಿ ಅವರು ಹೇಗೆ ಸುಖಿಸುವರೋ ನಾನರಿಯೆನು. ಸ್ತ್ರೀ ಪುರುಷರು ಕೆಲವಿಷಯಗಳಲ್ಲಿ ಮಾತ್ರ ಭಿನ್ನರಾಗಿದ್ದರೂ, ಜ್ಞಾನ, ಬುದ್ಧಿ, ಮೊದಲಾ ದುವುಗಳು ಮಾತ್ರ ಇಬ್ಬರಿಗೂ ಸಮಾನಗಳಾಗಿಯೇ ಇರುವುವು. ಆದುದ ರಿಂದ ಜ್ಞಾನಾಭಿವೃದ್ಧಿಗೆ ಕಾರಣಭೂತವಾದ ವಿದ್ಯೆಯು ಪುರುಷರಿಗೆ ಹೇಗೋ ಸ್ತ್ರೀಯರಿಗೂ ಹಾಗೆಯೇ ಪರಮ ಪ್ರಯೋಜನಕರವಾಗಿರುವುದರಲ್ಲಿ ಸಂದೇಹವಿಲ್ಲ. ಜ್ಞಾನನೇತ್ರಕ್ಕೆ ಸಹಾಯಕಾರಿಯಾದ ವಿದ್ಯೆಯಿಂದ ಪುರುಷರಿಗೆ ಶುಭವೂ ಸ್ತ್ರೀಯರಿಗೆ ಅಶುಭವೂ ಉಂಟಾಗುವುದೆಂದು ವಾದಿಸುವುದು, ಬಾಹ್ಯನೇತ್ರಕ್ಕೆ ಸಹಾಯಕಾರಿಯಾದ ಬೆಳಕನ್ನು ಪುರುಷರಿಗೆ ಪ್ರಯೋಜನಕಾರಿಯಾದುದಾಗಿಯೂ ಸ್ತ್ರೀಯರಿಗೆ ಅನರ್ಥಕಾರಿಯಾದು ದನ್ನಾಗಿಯೂ ಭಾವಿಸಿ ವಾದಿಸುವಂತೆ ಹಾಸ್ಯಾಸ್ಪದವಾದುದಲ್ಲವೆ? ಸಸಿಗಳಿ ಗೆರೆದ ನೀರು ಕಳೆಗಳು ಬೆಳೆಯುವುದಕ್ಕೂ ಉಪಯೋಗಕರವಾಗುವಂತೆ, ಸನ್ಮಾರ್ಗ ಪ್ರವರ್ತನೆಗೋಸುಗ ವಿನಿಯೋಗಿಸಲ್ಪಡಬೇಕಾದ ವಿದ್ಯೆಯು ಒಂದೊಂದುವೇಳೆ ಸ್ತ್ರೀ ಪುರುಷರ ದುರ್ಮಾಗಪ್ರವರ್ತನೆಗೂ ಸಹಾಯಕಾರಿ ಯಾಗಬಹುದು. ಕಳೆಯು ಬೆಳೆದೀತೆಂಬ ಶಂಕೆಯಿಂದ ನೀರೆರೆಯದೆಯೇ ಬೆಳೆಯನ್ನು ಒಣಗಿಸಿ ಹಾಳುಮಾಡುವುದು ಹೊಲದ ಯಜಮಾನನಿಗೆ ಹೇಗೆ ಧರ್ಮವಲ್ಲವೋ ಹಾಗೆಯೇ ಯಾವಾಗಲೋ ದುಷ್ಕಾರ್ಯಗಳಿಗೆ ಸಹಾಯ ಕಾರಿಯಾಗುವುದೆಂಬ ಶಂಕೆಯಿಂದ ಜ್ಞಾನಮೂಲವಾದ ವಿದ್ಯೆಯನ್ನು