Please enable javascript.BBC Russian" type="text/javascript">
Svoboda | Graniru | BBC Russia | Golosameriki | Facebook

ನಮ್ಮ ಮೆಟ್ರೋ ಹೆಬ್ಬಾಳ - ಸರ್ಜಾಪುರ 37 ಕಿ.ಮೀ ಮಾರ್ಗದ ಡಿಪಿಆರ್‌ ಸಲ್ಲಿಕೆ; 28 ನಿಲ್ದಾಣ ಎಲ್ಲೆಲ್ಲಿ?

Authored by ಜಯಪ್ರಕಾಶ್‌ ಬಿರಾದಾರ್‌ | Vijaya Karnataka Web 25 Jun 2024, 6:28 pm
Subscribe

Namma Metro Hebbal Sarjapur Route: ನಮ್ಮ ಮೆಟ್ರೋ ಮತ್ತೊಂದು ಹೊಸ ಮಾರ್ಗದ ಡಿಪಿಆರ್‌ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ಮಾರ್ಗವು 37 ಕಿಮೀ ಇರಲಿದ್ದು, 28 ನಿಲ್ದಾಣಗಳನ್ನು ಒಳಗೊಂಡಿದೆ. ಇನ್ನು ಯೋಜನಾ ವೆಚ್ಚ 16 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಹೈಲೈಟ್ಸ್‌:

  • ನಮ್ಮ ಮೆಟ್ರೋ ಮೂರನೇ ಹಂತದ ಹೆಬ್ಬಾಳ - ಸರ್ಜಾಪುರ ಮಾರ್ಗಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಕೆ.
  • 28 ನಿಲ್ದಾಣಗಳನ್ನು ಒಳಗೊಂಡಿರುವ 37 ಕಿ. ಮೀ ಇರುವ ಈ ಮಾರ್ಗದ ನಿರ್ಮಾಣಕ್ಕೆ ಅಂದಾಜು 16,500 ಕೋಟಿ ರೂ. ವೆಚ್ಚ.
  • ಹೆಬ್ಬಾಳ-ಸರ್ಜಾಪುರ ನಮ್ಮ ಮೆಟ್ರೋ ಕಾರಿಡಾರ್‌ ಅನ್ನು ನೀಲಿ, ಗುಲಾಬಿ ಹಾಗೂ ನೇರಳೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಸಾಧ್ಯತೆ.
ನಮ್ಮ ಮೆಟ್ರೋ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಮ್ಮ ಮೆಟ್ರೋ ಮೂರನೇ ಹಂತದ ಹೆಬ್ಬಾಳ - ಸರ್ಜಾಪುರ ಮಾರ್ಗಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಕೆಯಾಗಿದೆ. ಈ ಮೂಲಕ ಕೆಲ ವರ್ಷಗಳಲ್ಲಿಯೇ ಮತ್ತೊಂದು ಹೊಸ ಮೆಟ್ರೋ ಮಾರ್ಗ ಬರುವುದು ನಿಶ್ಚಿತ.
ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸಲು ನಮ್ಮ ಮೆಟ್ರೋ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಹೊಸ ಹೊಸ ಮಾರ್ಗಗಳನ್ನುಆರಂಭಿಸಲು ಯೋಜನೆ ರೂಪಿಸುತ್ತಿದೆ. 2022-23ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೆಬ್ಬಾಳ-ಸರ್ಜಾಪುರ ವಯಾ ಅಗರ, ಕೋರಮಂಗಲ ನಮ್ಮ ಮೆಟ್ರೋ ಯೋಜನೆಯನ್ನು ಘೋಷಣೆ ಮಾಡಿದ್ದರು. ಆಗ ಅಂದಾಜು ವೆಚ್ಚ 15 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಸದ್ಯ ಬಿಎಂಆರ್‌ಸಿಎಲ್ ಈ ಮಾರ್ಗದ ವಿಸ್ತೃತ ಯೋಜನಾ ವರದಿ ( ಡಿಪಿಆರ್ ) ಸಿದ್ಧಪಡಿಸಿದೆ.

16,500 ಕೋಟಿ ರೂ. ವೆಚ್ಚ

28 ನಿಲ್ದಾಣಗಳನ್ನು ಒಳಗೊಂಡಿರುವ 37 ಕಿ. ಮೀ ಇರುವ ಈ ಮಾರ್ಗದ ನಿರ್ಮಾಣಕ್ಕೆ ಅಂದಾಜು 16,500 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರವು ಈ ಡಿಪಿಆರ್‌ಗೆ ಅನುಮೋದನೆ ನೀಡಿದರೆ ಅಗತ್ಯ ಭೂಮಿ ವಶಪಡಿಸಿಕೊಂಡು ಕಾಮಗಾರಿ ಆರಂಭವಾಗಲಿದೆ.

ನಿರೀಕ್ಷಿತ 28 ಮೆಟ್ರೋ ನಿಲ್ದಾಣಗಳು ಯಾವುವು?

  • ಸರ್ಜಾಪುರ
  • ಕಾಡ ಅಗ್ರಹಾರ ರಸ್ತೆ
  • ಸೋಮಾಪುರ
  • ದೊಮ್ಮಸಂದ್ರ
  • ಮುತ್ತನಲ್ಲೂರು ಕ್ರಾಸ್
  • ಕೊಡತಿ ಗೇಟ್
  • ಅಂಬೇಡ್ಕರ್ ನಗರ
  • ದೊಡ್ಡಕನ್ನಳ್ಳಿ
  • ಕೈಕೊಂಡನಹಳ್ಳಿ
  • ಬೆಳ್ಳಂದೂರು ಗೇಟ್‌
  • ಅಗರ
  • ಜಕ್ಕಸಂದ್ರ
  • ಕೋರಮಂಗಲ 3ನೇ ಬ್ಲಾಕ್
  • ಕೋರಮಂಗಲ 2ನೇ ಬ್ಲಾಕ್
  • ಡೈರಿ ಸರ್ಕಲ್
  • ನಿಮ್ಹಾನ್ಸ್
  • ಶಾಂತಿ ನಗರ
  • ಟೌನ್ ಹಾಲ್
  • ಕೆಆರ್ ಸರ್ಕಲ್
  • ಬಸವೇಶ್ವರ ಸರ್ಕಲ್
  • ಬೆಂಗಳೂರು ಗಾಲ್ಫ್ ಕೋರ್ಸ್‌
  • ಪ್ಯಾಲೇಸ್ ಗುಟ್ಟಹಳ್ಳಿ
  • ಮೇಖ್ರಿ ಸರ್ಕಲ್
  • ವೆಟರ್ನರಿ ಕಾಲೇಜ್
  • ಗಂಗಾ ನಗರ
  • ಹೆಬ್ಬಾಳ

ಮೂರು ಮಾರ್ಗಕ್ಕೆ ಸಂಪರ್ಕ ಸಾಧ್ಯತೆ

ಹೆಬ್ಬಾಳ-ಸರ್ಜಾಪುರ ನಮ್ಮ ಮೆಟ್ರೋ ಕಾರಿಡಾರ್‌ ಅನ್ನು ನೀಲಿ, ಗುಲಾಬಿ ಹಾಗೂ ನೇರಳೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವಂತೆ ರೂಪಿಸಲಾಗಿದೆ ಎನ್ನಲಾಗಿದೆ. ಯಾವ ನಿಲ್ದಾಣಗಳಲ್ಲಿ ಸಂಪರ್ಕ ಎಂಬುದು ಖಚಿತವಾಗಬೇಕಿದೆ.

ಹಳದಿ ಮಾರ್ಗ ಶೀಘ್ರ ಆರಂಭ

ನಮ್ಮ ಮೆಟ್ರೋ ಹಳದಿ ಮಾರ್ಗ ಆರ್‌ವಿ ರಸ್ತೆ- ಬೊಮ್ಮಸಂದ್ರ ಪ್ರಯೋಗಿಕ ಪರೀಕ್ಷೆಗಳು ನಡೆಯುತ್ತಿವೆ. ಡಿಸೆಂಬರ್‌ ಅಂತ್ಯದ ಒಳಗೆ ತಿಂಗಳಲ್ಲಿ ಈ ಮಾರ್ಗಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ. ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. ಇನ್ನು ಎಲೆಕ್ಟ್ರಾನಿಕ್‌ ಐಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ನಾಗಸಂದ್ರ - ಮಾದಾವರ ನಮ್ಮ ಮೆಟ್ರೋ ಮಾರ್ಗ ವಿಸ್ತರಣೆ

ನಮ್ಮ ಮೆಟ್ರೋದ ಹಸಿರು ಮಾರ್ಗ ವಿಸ್ತರಣೆ ಇನ್ನೆರಡು ತಿಂಗಳಲ್ಲಿ ಆಗಲಿದೆ. ನಾಗಸಂದ್ರ - ಮಾದಾವರ ನಡುವಿನ 2 ಕಿ.ಮೀ. ಮೆಟ್ರೋ ಮಾರ್ಗ ಜುಲೈ ಅಂತ್ಯದೊಳಗೆ ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 ಜಯಪ್ರಕಾಶ್‌ ಬಿರಾದಾರ್‌
ಲೇಖಕರ ಬಗ್ಗೆ
ಜಯಪ್ರಕಾಶ್‌ ಬಿರಾದಾರ್‌
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. ಚಿನ್ನದ ಪದಕದೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಆರು ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ಆರೋಗ್ಯ, ಅರಣ್ಯ, ಸಾರಿಗೆ, ರಾಜಕೀಯ, ಕೊರೊನಾ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯದ ಕುರಿತು ಒಂದು ಸಾವಿರಕ್ಕೂ ಅಧಿಕ ವಿಶೇಷ ವರದಿಗಳನ್ನು ಬರೆದಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೊಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ