Please enable javascript.BBC Russian" type="text/javascript">
Svoboda | Graniru | BBC Russia | Golosameriki | Facebook

ಕಳೆಗಟ್ಟಿದ ಲಿಂಗಸುಗೂರಿನ ನಾರಾಯಣಪುರ ಜಲಾಶಯ : ನೀರಿನ ಮಟ್ಟ ಹೆಚ್ಚಳ

Curated byಸೌಮ್ಯಶ್ರೀ ಮಾರ್ನಾಡ್ | Vijaya Karnataka 24 Jun 2024, 10:46 am
Subscribe

ಆಲಮಟ್ಟಿ ಜಲಾಶಯದ ನೀರು ಸಂಗ್ರಹ ಹೆಚ್ಚಳವಾಗಿರುವುದರಿಂದ ನಾರಾಯಣಪುರ ಜಲಾಶಯದ ನೀರಿನ ಮಟ್ಟವೂ ಹೆಚ್ಚಳವಾಗಿದೆ. ರಾಯಚೂರು, ವಿಜಯಪುರ, ಯಾದಗಿರಿ, ಕಲಬುರಗಿ ಜಿಲ್ಲೆಯ ಕುಡಿಯುವ ನೀರಿಗಾಗಿ ನದಿಗೆ ಬಿಡಲಾಗಿದೆ. ನಾರಾಯಣಪುರ ಜಲಾಶಯದ ಸುತ್ತಲಿನ ಮುದ್ದೇಬಿಹಾಳ, ಬದಾಮಿ, ಹುನಗುಂದ ಭಾಗದಲ್ಲಿ ಮಳೆಯಾದ್ದರಿಂದ ನಾರಾಯಣಪುರ ಜಲಾಶಯಕ್ಕೆ ನೀರು ಹರಿದುಬಂದಿದೆ. ಸದ್ಯ ಜಲಾಶಯದಲ್ಲಿ 489.20 ನೀರಿನ ಮಟ್ಟ ಇದೆ, ಈ ವಾರವೂ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ.

ಹೈಲೈಟ್ಸ್‌:

  • ನಾರಾಯಣಪುರ ಜಲಾಶಯದ ಸುತ್ತಮುತ್ತ ಮುದ್ದೇಬಿಹಾಳ, ಬದಾಮಿ, ಹುನಗುಂದ ಭಾಗದಲ್ಲಿ ಮಳೆಯಾದ್ದರಿಂದ ಜಲಾಶಯಕ್ಕೆ ನೀರು ಹರಿದು ಬಂದು ಜೀವಕಳೆ ಬಂದಂತಾಗಿರುತ್ತದೆ.
  • ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹ ಹೆಚ್ಚಳವಾದಲ್ಲಿ ನಾರಾಯಣಪುರ ಜಲಾಶಯಕ್ಕೆ ನೀರು ಹರಿದುಬಂದು ಜಲಾಶಯಕ್ಕೆ ಮತ್ತಷ್ಟು ಜೀವಕಳೆ ಬರುತ್ತದೆ.
  • ಭಾನುವಾರ ಜಲಾಶಯದಲ್ಲಿ 21.167 ಟಿಎಂಸಿ ಯಷ್ಟು ನೀರು ಸಂಗ್ರಹವಿದ್ದು, 489.20 ನೀರಿನ ಮಟ್ಟ ಇದೆ
Narayanapura Reservoir
ಲಿಂಗಸುಗೂರು: ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬರಗಾಲದ ನಡುವೆಯೂ ಮಹಾರಾಷ್ಟ್ರದಲ್ಲಿ ಮಳೆಯಾಗಿದ್ದರಿಂದ ಆಲಮಟ್ಟಿ ಜಲಾಶಯದ ಒಳಹರಿವಿನಿಂದ ನಾರಾಯಣಪುರ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿತ್ತು. ರೈತರಿಗೆ ಎರಡನೇ ಬೆಳೆ ಅಂದರೆ ಬೇಸಿಗೆ ಹಂಗಾಮಿಗೆ ನೀರಿನ ಅಭಾವ ಕಂಡುಬರುವ ಮುನ್ಸೂಚನೆಯಿಂದ ಬೇಸಿಗೆಯಲ್ಲಿ ಭತ್ತ ಬೆಳೆಯಲು ರೈತರು ಮುಂದಾಗಲಿಲ್ಲ.

ನೀರು ಖಾಲಿ:

ಎರಡನೇ ಅವಧಿಗೆ ರೈತರು ಬೆಳೆ ಬೆಳೆಯದೇ ಇದ್ದುದರಿಂದ ಜಲಾಶಯದಲ್ಲಿದ್ದ ನೀರು ನಾನಾ ಕಾರಣಗಳಿಂದಾಗಿ ನದಿ, ಕಾಲುವೆ ಮೂಲಕ ಹರಿಸಿದ್ದರಿಂದ ಪ್ರಸ್ತುತ ವರ್ಷ ಮೇ 15 ರವರೆಗೆ ನೀರು ಹರಿಸಿದ್ದರಿಂದ ಜಲಾಶಯದಲ್ಲಿ ನೀರು ಖಾಲಿಯಾಗಿತ್ತು. 2024 ಜೂನ್ 7ರಂದು ನಾರಾಯಣಪುರ ಜಲಾಶಯದಲ್ಲಿ 17.421 ಟಿಎಂಸಿ ವರೆಗೆ ನೀರು ಇಳಿಮುಖವಾಗಿತ್ತು. 488.04 ಮೀ. ಎತ್ತರ ನೀರಿನ ಸಂಗ್ರಹವಿತ್ತು. ನಂತರ ಕಳೆದ 20 ದಿನಗಳ ಅಂತರದಲ್ಲಿ ನಾರಾಯಣಪುರ ಜಲಾಶಯದ ಸುತ್ತಮುತ್ತ ಮುದ್ದೇಬಿಹಾಳ, ಬದಾಮಿ, ಹುನಗುಂದ ಭಾಗದಲ್ಲಿ ಮಳೆಯಾದ್ದರಿಂದ ಜಲಾಶಯಕ್ಕೆ ನೀರು ಹರಿದು ಬಂದು ಜೀವಕಳೆ ಬಂದಂತಾಗಿರುತ್ತದೆ.

ತುಂಗಭದ್ರಾ ನದಿ ಅಚ್ಚುಕಟ್ಟು ಪ್ರದೇಶಗಳಲ್ಲಿಉತ್ತಮ ಮಳೆ: ಆರ್‌ಡಿಎಸ್‌ ಅಣೆಕಟ್ಟು ಭರ್ತಿ


ಆಲಮಟ್ಟಿ ಜಲಾಶಯಕ್ಕೆ ನೀರು:

ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಮೀರಜ್, ಕೊಯ್ತಾ ಭಾಗದಲ್ಲಿ ಸಾಕಷ್ಟು ಮಳೆಯಾದರೆ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದುಬರುತ್ತದೆ. ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹ ಹೆಚ್ಚಳವಾದಲ್ಲಿ ನಾರಾಯಣಪುರ ಜಲಾಶಯಕ್ಕೆ ನೀರು ಹರಿದುಬಂದು ಜಲಾಶಯಕ್ಕೆ ಮತ್ತಷ್ಟು ಜೀವಕಳೆ ಬರುತ್ತದೆ.


ನೀರು ಸಂಗ್ರಹ

ಭಾನುವಾರ ಜಲಾಶಯದಲ್ಲಿ 21.167 ಟಿಎಂಸಿ ಯಷ್ಟು ನೀರು ಸಂಗ್ರಹವಿದ್ದು, 489.20 ನೀರಿನ ಮಟ್ಟ ಇದೆ. ಬೇಸಿಗೆ ಹಂಗಾಮಿನಲ್ಲಿ ನಾರಾಯಣಪುರದಲ್ಲಿ ಸಂಗ್ರಹವಾಗಿದ್ದ ನೀರನ್ನು ಅವೈಜ್ಞಾನಿಕವಾಗಿ ಹರಿಸಿದ್ದರಿಂದ ಹಾಗೂ ಆಂಧ್ರಪ್ರದೇಶಕ್ಕೆ ನೀರು ಹರಿಸಲಾಗಿದೆಯೆಂದು ಹಬ್ಬಿರುವ ವದಂತಿಯಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಖಾಲಿಯಾಗಿ ಜಲಾಶಯ ಬರಿದಾಗಲು ಕಾರಣವಾಗಿತ್ತು ಎಂದು ಹೇಳಲಾಗುತ್ತಿದೆ.

ನದಿಗೆ ನೀರು

ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹಾಗೂ ಯಾದಗಿರಿ ಜಿಲ್ಲೆಗೆ 0.607 ಟಿಎಂಸಿ, ವಿಜಯಪುರ ಜಿಲ್ಲೆಗೆ 2.463 ಟಿಎಂಸಿ ಹಾಗೂ ರಾಯಚೂರು ಶಾಖೋತ್ಪನ್ನ ಕೇಂದ್ರಕ್ಕೆ 18 ಜನವರಿ 2024 ರಿಂದ 15 ಮೇ 2024 ರವರೆಗೆ 4.80 ಟಿಎಂಸಿ ಕುಡಿಯುವ ನೀರಿಗಾಗಿ ಕೃಷ್ಣಾ ನದಿಗೆ ಮೇ 1 ರಿಂದ ಮೇ 15 ರವರೆಗೆ 2.25 ಟಿಎಂಸಿ ನೀರು ಬಿಡಲಾಗಿದೆ. ಒಟ್ಟು 7.34 ಟಿಎಂಸಿ ಕುಡಿಯುವ ನೀರಿಗಾಗಿ ಕಾಲುವೆ ಮೂಲಕ, 4.80 ಟಿಎಂಸಿ ಆಲ್ಟಿಪಿಎಸ್‌ಗೆ ಹಾಗೂ 2.25 ಟಿಎಂಸಿ ಕುಡಿಯುವ ನೀರಿಗಾಗಿ ಕೃಷ್ಣಾನದಿ ಮೂಲಕ ಹರಿ ಬಿಡಲಾಗಿದೆ.
ಸೌಮ್ಯಶ್ರೀ ಮಾರ್ನಾಡ್
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ